ಮಂಗಳೂರು: ನಾನು ಮಠದ ಹುಡುಗ. ಆದಿಚುಂಚನಗಿರಿ ಮಠದಲ್ಲಿ ಬೆಳೆದಿದ್ದು. ನಾನು ಜೆಡಿಎಸ್‌ಗೆ ಬರಲು ಆದಿಚುಂಚನಗಿರಿಯ ಹಿರಿಯ ಸ್ವಾಮೀಜಿಗಳು ಕಾರಣ ಎಂದು ಹೆಚ್.ಡಿ.ಕುಮಾರಸ್ವಾಮಿಗೆ ಸಚಿವ ಜಮೀರ್ ಅಹ್ಮದ್ ತಿರುಗೇಟು ಕೊಟ್ಟರು.
ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ? ಯೂಟರ್ನ್ ಕುಮಾರಸ್ವಾಮಿ ಅಂತ ಅವರಿಗೆ ಹೆಸರಿದೆ. ಯಾವಾಗ ಬೇಕಾದರೂ ಹೇಗೆ ಬೇಕಾದರೂ ಟರ್ನ್ ಮಾಡುತ್ತಾರೆ ಅವರು. ವೈಯಕ್ತಿಕವಾಗಿ ಕುಮಾರಸ್ವಾಮಿಗೆ ಹೇಳಿರುವುದು. ಒಕ್ಕಲಿಗರ ಬಗ್ಗೆ ನನಗೆ ಗೌರವ ಇದೆ. ಒಕ್ಕಲಿಗರಿಗೆ ಯಾವ ಹೇಳಿಕೆ ನೀಡಿಲ್ಲ. ಜನತಾದಳಕ್ಕೆ ಬರಲು ಕಾರಣ ಆದಿ ಚುಂಚನಗಿರಿ ಹಿರಿಯ ಸ್ವಾಮೀಜಿ. ನಾನು ಮಠದ ಹುಡುಗ, ಆದಿಚುಂಚನಗಿರಿ ಮಠದಲ್ಲಿ ಬೆಳೆದಿದ್ದು ನಾನು ಎಂದು ತಿಳಿಸಿದರು.
ನಂದು ನನಗೆ, ಅವರ ಅಭಿಪ್ರಾಯ ಹೇಳಿದ್ದಾರೆ. ಏನಂತ ಹೇಳಿದ್ದಾರೆ. ಡಿಕೆಶಿ ಹೇಳಿಕೆ ನಾನು ನೋಡಿಲ್ಲ. ಜಮೀರ್ ಬಂದಿದ್ದು ಪ್ಲಸ್ ಆಗಿದೆ ಸ್ವಲ್ಪ. ಹೇಳಿಕೆಯಿಂದ ಅನಾನುಕೂಲ ಆಗಿದೆ ಅಂತ ಯೋಗಿಶ್ವರ್ ಹೇಳಿದ್ದಾರೆ. ಬರೆದಿಟ್ಟುಕೊಳ್ಳಿ, ಚನ್ನಪಟ್ಟಣದಲ್ಲಿ ಏನೇನು ಆಗುವುದಿಲ್ಲ. ಚನ್ನಪಟ್ಟಣದಲ್ಲಿ ಮೂರು ದಿನ ಪ್ರಚಾರ ಮಾಡಿದ್ದೇನೆ. ಯೋಗೇಶ್ವರ್ 18 ರಿಂದ 20 ಸಾವಿರ ಮತದಿಂದ ಗೆಲ್ಲುತ್ತಾರೆ ಬರೆದಿಟ್ಟುಕೊಳ್ಳಿ ಎಂದು ಭರವಸೆ ವ್ಯಕ್ತಪಡಿಸಿದರು.